ಕೀಬೋರ್ಡ್ ವಾದ್ಯ (ಕೀಬೋರ್ಡ್ ಇನ್ ಸ್ಟ್ರಮೆಂಟ್ )
ಕೀಬೋರ್ಡ್ ವಾದ್ಯ ವೆಂಬುದು ಸಂಗೀತದ ಕೀಬೋರ್ಡ್ ಅನ್ನು ಬಳಸಿಕೊಂಡು ಯಾವುದೇ ಸಂಗೀತವಾದ್ಯವನ್ನು ನುಡಿಸುವುಂತಹದ್ದಾಗಿದೆ. ಇದರಲ್ಲಿ ಅತ್ಯಂತ ಸಾಮಾನ್ಯವಾದುದ್ದೆಂದರೆ ಪಿಯಾನೋ. ಕೀಬೋರ್ಡ್ ವಾದ್ಯವನ್ನು ಹೆಚ್ಚಾಗಿ ಬಳಸುವಂತಹ ಇತರೆ ವಾದ್ಯಗಳು ವಿವಿಧ ರೀತಿಯ ವಾದ್ಯಗಳನ್ನು ಮತ್ತು ಇತರೇ ಯಾಂತ್ರಿಕ, ವಿದ್ಯುದ್ಯಾಂತ್ರಿಕ ಮತ್ತು ಎಲೆಕ್ಟ್ರಾನಿಕ್ ವಾದ್ಯಗಳನ್ನು ಒಳಗೊಂಡಿವೆ. ಸಾಮಾನ್ಯ ಭಾಷೆಯಲ್ಲಿ ಇದನ್ನು ವಿಶೇಷವಾಗಿ ಕೀಬೋರ್ಡ್-ಶೈಲಿಯ ಸಂಯೋಜಕ ವಾದ್ಯಗಳನ್ನು ಸೂಚಿಸಲು ಬಳಸಲಾಗುತ್ತದೆ.
ಹಿಂದೆ ಇದ್ದಂತಹ ಕೀಬೋರ್ಡ್ ವಾದ್ಯಗಳಲ್ಲಿ ಗಾಳಿವಾದ್ಯ (ಕೊಳಲುಗಳಲ್ಲಿ ಒಂದು), ಹುರುಡಿ ಗುರ್ಡಿ(ತಂತಿವಾದ್ಯ), ಕ್ಲ್ಯಾವಿಕಾರ್ಡ್, ಮತ್ತು ಹಾರ್ಪ್ಸಿಕಾರ್ಡ್ ಗಳನ್ನು ನೋಡಬಹುದು. ವಾದ್ಯವು ಯಾವುದೇ ಸಂದೇಹವಿಲ್ಲದೆ ಕ್ರಿಸ್ತಪೂರ್ವ 3 ನೇ ಶತಮಾನದಲ್ಲಿ ಕಂಡುಬಂದಂತಹ ಇವುಗಳಿಗಿಂತ ಹಿಂದಿನದಾಗಿದೆ. ಆದರೂ ಹೈಡ್ರಾಲಿಸ್ ಎಂದು ಕರೆಯಲ್ಪಡುವ ಮೊದಲಿನ ಈ ವಾದ್ಯ ಆಧುನಿಕ ರೀತಿಯಂತೆ ಕೀಬೋರ್ಡ್ ಅನ್ನು ಬಳಸುತ್ತಿರಲಿಲ್ಲ. 14ನೇ ಶತಮಾನದಲ್ಲಿ ಇದನ್ನು ಕಂಡುಹಿಡಿಯುವ ವರೆಗು ಆರ್ಗನ್ (ವಾದ್ಯ) ಉಳಿದುಕೊಂಡಿದ್ದಂತಹ ಏಕಮಾತ್ರ ಕೀಬೋರ್ಡ್ ವಾದ್ಯವಾಗಿತ್ತು. ವಾದ್ಯವು ಕೀಬೋರ್ಡ್ ನಂತೆ ಇಲ್ಲದಿದ್ದರು ಇಡೀ ಕೈಯಿಂದ ನುಡಿಸಬೇಕಿದ್ದಂತಹ ಗುಂಡಿ ಅಥವಾ ದೊಡ್ಡ ಕೋಲನ್ನು ಹೊಂದಿದ್ದವು. 15 ನೇ ಶತಮಾನದ ವರೆಗು ಬಹುಮಟ್ಟಿಗೆ ಎಲ್ಲಾ ಕೀಬೋರ್ಡ್ ಗಳು ಅಷ್ಟಕಕ್ಕೆ ಸಹಜವಾಗಿದ್ದವು.
ಕ್ಲ್ಯಾವಿಕಾರ್ಡ್ ಮತ್ತು ಹಾರ್ಪ್ಸಿಕಾರ್ಡ್ ಗಳು 14ನೇ ಶತಮಾನದಲ್ಲಿ ಕಾಣಿಕೊಂಡವು. ಮೊದಲು ಬಂದ್ದದ್ದು ಬಹುಶಃ ಕ್ಲ್ಯಾವಿಕಾರ್ಡ್. 18ನೇ ಶತಮಾನದಲ್ಲಿ ಪಿಯಾನೋವನ್ನು ಬಹುವ್ಯಾಪಾಕವಾಗಿ ಬಳಸುವವರೆಗು ಹಾರ್ಪ್ಸಿಕಾರ್ಡ್ ಮತ್ತು ಕ್ಲ್ಯಾವಿಕಾರ್ಡ್ ಅತ್ಯಂತ ಸಾಮಾನ್ಯವಾಗಿದ್ದವು. ಇಲ್ಲಿಂದ ಅವುಗಳ ಜನಪ್ರಿಯತೆ ಕಡಿಮೆಯಾಗುತ್ತ ಹೋಯಿತು. ಪಿಯಾನೋ ಕ್ರಾಂತಿಕಾರಕವಾಗಿತ್ತು ಏಕೆಂದರೆ ಇದರಲ್ಲಿ ಪಿಯಾನೋವಾದಕ ಪ್ರತಿಯೊಂದು ಕೀಲುಗಳನ್ನು ಒತ್ತುತ್ತ ವಿಗರ್ ಅನ್ನು ಬದಲಾಯಿಸುವುದರ ಮೂಲಕ ಶಬ್ದದ(ನಾದದ) ಪ್ರಮಾಣವನ್ನು(ಅಥವಾ ನಾದಪ್ರಮಾಣ) ಬದಲಾಯಿಸಬಹುದಾಗಿತ್ತು. ಪಿಯಾನೋ ಸಂಪೂರ್ಣ ಹೆಸರು "ಗ್ರ್ಯಾವಿಸೆಂಬಲೊ ಕಾನ್ ಪಿಯಾನೋ ಎ ಫೋರ್ಟಿ" ಎಂದಾಗಿದೆ. ಇದರ ಅರ್ಥ "ಮಂದಸ್ವರದ ಮತ್ತುಉಚ್ಚ ಸ್ವರದೊಂದಿಗೆ ಹಾರ್ಪ್ಸಿಕಾರ್ಡ್" ಆದರೆ ಇದನ್ನು ಕತ್ತರಿಸಿ "ಪಿಯಾನೋ-ಫೋರ್ಟಿ" ಮಾಡಲಾಗಿದೆ. ಇದು ಇಟಾಲಿಯನ್ ನಲ್ಲಿ "ಮಂದ-ಉಚ್ಚ" ಎಂಬ ಅರ್ಥವನ್ನು ಕೊಡುತ್ತದೆ.
ಕೀಬೋರ್ಡ್ ವಾದ್ಯಗಳನ್ನು 20 ನೇ ಶತಮಾನದಲ್ಲಿ ಇನ್ನಷ್ಟು ಅಭಿವೃದ್ಧಿಪಡಿಸಲಾಯಿತು. ಒನ್ ಡೆಸ್ ಮಾರ್ಟೆಂಟೋ ನಂತಹ ಮೊದಲಿನ ವಿದ್ಯುದ್ಯಾಂತ್ರಿಕ ವಾದ್ಯಗಳು ಶತಮಾನದ ಪೂರ್ವಾರ್ಧದಲ್ಲಿ ಕಾಣಿಸಿಕೊಂಡವು.
ಪಿಯಾನೋ ಕೀಲುಗಳನ್ನು ಸಹಜವಾದ ವಸ್ತುಗಳಿಂದ ಮಾಡಲಾಗಿತ್ತು. ಬಿಳಿಯ ಸ್ಪರ್ಶಕಗಳನ್ನು ದಂತದಿಂದ, ಕರಿಮರದ(ಎಬನಿ) ಕಪ್ಪಿನಿಂದ ಮಾಡಲಾಗುತ್ತಿತ್ತು.ಆದರೆ ಈಗ ಪ್ಲ್ಯಾಸ್ಟಿಕ್ ನಂತಹ ಕೃತಕವಸ್ತುಗಳನ್ನು ಮರದ ಕೀಲುಗಳನ್ನು ಮುಚ್ಚಲು ಬಳಸಲಾಗುತ್ತದೆ. ಈಗ ಓಕ್ , ವಾಲ್ ನಟ್ , ಮತ್ತು ಮೃದು ಮರಗಳಂತಹ ಅಗ್ಗದ ವಸ್ತುಗಳನ್ನು ಬಳಸಲಾಗುತ್ತದೆ.
ಪಿಯಾನೋ ತರಹದ ಆದರೆ ಅದಕ್ಕಿಂತ ಕಡಿಮೆ ಗಾತ್ರ ಮತ್ತು ತೂಕವನ್ನು ಹೊಂದಿರುವಂತಹ ವಾದ್ಯವನ್ನು ಕಂಡುಹಿಡಿಯುವುದರಲ್ಲೇ ಶ್ರಮವೆಲ್ಲ ವ್ಯರ್ಥವಾಯಿತು. ಎಲೆಕ್ಟ್ರಿಕ್ ಪಿಯಾನೋ ಮತ್ತು ಎಲೆಕ್ಟ್ರಾನಿಕ್ ಪಿಯಾನೋ ಮೊದಲು ಮಾಡಿದ್ದಂತಹ ಪ್ರಯತ್ನಗಳಾಗಿದ್ದು, ಉಪಯುಕ್ತ ವಾದ್ಯಗಳಾಗಿದ್ದರು ಅವುಗಳು ಮನಗಾಣಿಸುವಂತೆ ಪಿಯಾನೋವಿನ ಸ್ವರ ನುಡಿಯುವ ಕಾಲವನ್ನು ಪುನರುತ್ಪಾದಿಸುವುದರಲ್ಲಿ ಯಶಸ್ವಿಯಾಗಲಿಲ್ಲ. ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ ಆರ್ಗನ್ಸ್(ವಾದ್ಯಗಳು) ಗಳನ್ನು ಒಂದೇ ಕಾಲದಲ್ಲಿ ಕಂಡುಹಿಡಿಯಲಾಯಿತು.
1960 ರಲ್ಲಿ ಸಂಯೋಜಕ ವಾದ್ಯಗಳ ಪ್ರಮುಖ ಅಭಿವೃದ್ಧಿ ನಡೆಯಿತ್ತಲ್ಲದೇ ,ಇದು ಈಗಲೂ ಮುಂದುವರೆಯುತ್ತಲಿದೆ. ಹಿಂದೆ ಇದ್ದಂತಹ ಅತ್ಯಂತ ಉತ್ತಮ ಸಂಯೋಜಕ ವಾದ್ಯ ವೆಂದರೆ ಮೂಗ್ ಸಂಯೋಜಕ ವಾದ್ಯವಾಗಿದೆ. ಇದು ಸದೃಶಿ ವಿದ್ಯುನ್ಮಂಡಲವನ್ನು ಬಳಸುತ್ತದೆ. ಸರಿಯಾದ ಸಮಯದಲ್ಲಿ ನಿಜವಾದ ಪಿಯಾನೋ ಮಾದರಿಗಳನ್ನು ಬಳಸುವಂತಹ ಡಿಜಿಟಲ್ ಸಿಂತಿಸಿಸ್ ಸಾಮಾನ್ಯವಾಗಿದೆ.
ಕೀಬೋರ್ಡ್ ವಾದ್ಯಗಳ ಪಟ್ಟಿ
[ಬದಲಾಯಿಸಿ]ಕ್ರೋಡೋಫೋನ್ಸ್
[ಬದಲಾಯಿಸಿ]- ಕ್ಲ್ಯಾವಿಕಾರ್ಡ್
- ಎಲೆಕ್ಟ್ರಿಕ್ ಪಿಯಾನೋ
- ಹಾರ್ಪ್ಸಿಕಾರ್ಡ್
- ಪಿಯಾನೊ
- ಟ್ಯಾನ್ ಜೆಂಟ್ ಪಿಯಾನೋ
- ಬೌಡ್ ಕ್ಲ್ಯಾವಿಯರ್
- ಹುರ್ಡಿ ಗುರ್ಡಿ
ಏರೋಫೋನ್ಸ್
[ಬದಲಾಯಿಸಿ]ಇಡಿಯೋಪೋನ್ಸ್
[ಬದಲಾಯಿಸಿ]ಎಲೆಕ್ಟ್ರೋಫೋನ್ಸ್
[ಬದಲಾಯಿಸಿ]- ಡಿಜಿಟಲ್ ಪಿಯಾನೋ
- ಎಲೆಕ್ಟ್ರಾನಿಕ್ ಕೀಬೋರ್ಡ್
- ಎಲೆಕ್ಟ್ರಾನಿಕ್ ಆರ್ಗನ್
- ಎಲೆಕ್ಟ್ರಾನಿಕ್ ಪಿಯಾನೋ
- ಕಿಟಾರ್
- ಮೆಲೊಟ್ರಾನ್
- ಆಪ್ಟಿಗನ್
- ಸಂಯೋಜಕ ವಾದ್ಯ
ಇವನ್ನೂ ನೋಡಿ
[ಬದಲಾಯಿಸಿ]ಆಕರಗಳು
[ಬದಲಾಯಿಸಿ]ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (March 2008) |
ಹೊರಗಿನ ಕೊಂಡಿಗಳು
[ಬದಲಾಯಿಸಿ]- ದಿ ಜನರಲ್ ಕೀಬೋರ್ಡ್ ಇನ್ ದಿ ಏಜ್ ಆಫ್ MIDI.
- [http://www.metmuseum.org/toah/hd/renk/hd_renk.htm ರಿನೇಸಾನ್ಸ್ ಕೀಬೋ
ರ್ಡ್ಸ್] ಆನ್ ದಿ ಹೆಲ್ ಬ್ರುನ್ ಟೈಮ್ ಲೈನ್ ಆಫ್ ಆರ್ಟ್ ಹಿಸ್ಟ್ರಿ , ದಿ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್
- ದಿ ಪಿಯಾನೋಫೋರ್ಟೀಸ್ ಆಫ್ ಬಾರ್ಟೋಲೋಮಿಯೋ ಕ್ರಿಸ್ಟೋಫೋರಿ ಆನ್ ದಿ ಹೆಲ್ ಬ್ರುನ್ ಟೈಮ್ ಲೈನ್ ಆಫ್ ಆರ್ಟ್ ಹಿಸ್ಟ್ರಿ ದಿ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್